ತನಗಿಲ್ಲದ ಶಿಕ್ಷಣ ತಾಲೂಕಿನ ಎಲ್ಲರಿಗೂ ದೊರೆಯಬೇಕೆಂಬ ಸಂಕಲ್ಪಶ್ರೀ ಗಣೇಶ ಹೆಗಡೆ ದೊಡ್ಮನೆ
ನೂರು ವರ್ಷಗಳ ಹಿಂದೆ ಸಿದ್ದಾಪುರ ತಾಲೂಕು ದಟ್ಟ ಅಡವಿ ಪ್ರದೇಶ, ವಿಪರೀತ ಮಳೆ, ಸಾರಿಗೆ ಸಂಪರ್ಕಗಳಿಲ್ಲ, ಮಲೇರಿಯಾ ರೋಗದ ಹಾವಳಿ, ಬಡತನ ಅನಕ್ಷರತೆಗಳು ಕಾಲು ಮುರಿದು ಬಿದ್ದಿದ್ದವು. ಸಿದ್ದಾಪುರದಿಂದ 25 ಕಿ.ಮಿ ದೂರದ ದೊಡ್ಮನೆ ದೊಡ್ಡ ಕುಟುಂಬದಲ್ಲಿ ಶ್ರೀ ಗಣೇಶ ಹೆಗಡೆ ಜನನ.
ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದು, ನಾಲ್ಕನೇ ಕ್ಲಾಸ್ವರೆಗೆ ಓದು, ಸ್ವಾಭಿಮಾನಿ, ಸ್ವತಂತ್ರ ಮನೋವೃತ್ತಿ, ಕಾರಣ ಸೈಕಲ್ ಮೇಲೆ ಹಳ್ಳಿಗಳನ್ನು ತಿರುಗಿ ವ್ಯಾಪಾರ ಹಾಗೆ ಬೆಳೆದ ಗಣೇಶ ಹೆಗಡೆ ತನಗಿಲ್ಲದ ಶಿಕ್ಷಣ ತಾಲೂಕಿನ ಎಲ್ಲರಿಗೂ ದೊರೆಯಬೇಕೆಂಬ ಸಂಕಲ್ಪ ತೊಟ್ಟರು.
ಅದಕ್ಕಾಗಿ ಸಹಕಾರಿ ತತ್ವದಡಿ ಶಿಕ್ಷಣ ಪ್ರಸಾರಕ ಸಮಿತಿ ಸ್ಥಾಪನೆ. ಸಿದ್ದಾಪುರದಲ್ಲಿ ಹೈಸ್ಕೂಲ ಸ್ಥಾಪನೆ, ನಂತರ ಇಟಗಿ, ದೊಡ್ಮನೆ, ಬಿಳಗಿ ಮತ್ತೆ ಸಿದ್ದಾಪುರದಲ್ಲಿ ಬಾಲಕೀಯರ ಹೈಸ್ಕೂಲ ಸ್ಥಾಪನೆ. ಎಂ.ಜಿ.ಸಿ ಕಾಲೇಜು ಸ್ಥಾಪಿಸಿದವರು ಹೆಗಡೆ. ಅದರಿಂದಾಗಿ ಹಳ್ಳಿಗಾಡಿನ ಹಿಂದುಳಿದವರು, ಬಡವರು ಶಿಕ್ಷಣವಂತರಾಗಲು ಸಾಧ್ಯವಾಯಿತು.
ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಸ್ವತಂತ್ರ ಸುಸಜ್ಜಿತ ಕಟ್ಟಡ, ವಾಚನಾಲಯ, ಪ್ರಯೋಗಾಲಯಗಳಿಂದ ವ್ಯವಸ್ಥಿತ. ಆಯುರ್ವೇದ ಕಾಲೇಜು ಆರಂಭ, ಸಹಕಾರಿ ತತ್ವದಿಂದ ಹೊರಬಂದು ಶಿಕ್ಷಣ ಸಂಸ್ಥೆಯಾಗಿ ಅಪೂರ್ವ ಸಾಧನೆ ಮಾಡಿದವರು ಹೆಗಡೆಯವರು.
ಪ್ರಸ್ತುತ ತಾಲೂಕು ಸಂಪೂರ್ಣ ಸಾಕ್ಷರತೆ ಸಾಧಿಸಿದೆ. ಹಿಂದುಳಿದವರು ಇಲ್ಲಿ ಕಲಿತು ಐ.ಎ.ಎಸ್ ಮಾಡಿದ್ದಾರೆ. ಇಂದು ಸರಕಾರಿ ಕಾಲೇಜುಗಳಾಗಿವೆ. ಆದರೆ ಆ ಕಾಲದಲ್ಲಿ ಹೆಗಡೆಯವರು ಜನ ಶಿಕ್ಷಣಕ್ಕಾಗಿ ದುಡಿದದ್ದು ಅವಿಸ್ಮರಣೀಯ.
— ಕಾಶ್ಯಪ ಪರ್ಣಕುಟಿ
From the bottom of our hearts
Shri Ganesh Hegde Dodmane, the founder of these educational institutions, had a strong desire to provide higher education to the young people of Siddapur taluk, an economically backward rural area.
A freedom fighter, he was driven by a deeply social purpose: he had been unable to pursue higher education in his own childhood, and he was determined that the youth of this poor taluk should have the opportunity to study.
His spirited vision and restless zeal gave shape to the Shikshana Prasaraka Samiti, Siddapur, which today runs classes from nursery to degree level and an Ayurveda college with postgraduate courses. Achieving this unparalleled dream was a path not of roses but of thorns. Yet it was done.
Today his visionary steps on this land, his spirited work in this rural community and his zeal for the good of local society stand proudly fulfilled in the Shikshana Prasaraka Samiti, Siddapur.
— Shri G.K. Hegde Golgod
